ಕೃಷಿಕ ಭಾರತಿ
ಕೃಷಿಕರು ದೇಶವನ್ನು ಬಲಪಡಿಸುತ್ತಾರೆ ಮತ್ತು ನಾವು ಕೃಷಿಕರನ್ನು ಸಬಲಗೊಳಿಸುತ್ತೆವೆ. ಅಂದರೆ ನಾವು ಒಟ್ಟಾಗಿ ಕೃಷ್ಶಿಯನ್ನು ಮುನ್ನೆಡೆಸುತ್ತೆವೆ. ಕೃಷಿ ಎನ್ನುವುದು ಸಾರ್ವಕಾಲಿಕ ಪಾರಂಪರಿಕ ಭಾರತದ ವೃತ್ತಿಯಾಗಿದ್ದು ಇಂತಹ ಪಾರಂಪರಿಕ ಕೃಷಿಯು ಕೂಡ ಇಂದು ಸಂಕಷ್ಟದಲ್ಲಿದೆ. ಅತಿವೃಷ್ಟಿ , ಅನಾವೃಷ್ಠಿ ಅಸಮರ್ಪಕ ಬೆಳೆ, ಯಂತ್ರೋಪಕರಣಗಳ ಅಭಾವ, ಆರ್ಥಿಕತೆ, ಸೂಕ್ತವಾದ ಬೆಲೆ ದೊರೆಯದೆ ಇರುವುದು , ರಸಗೊಬ್ಬರಗಳ ಪೂರೈಕೆ ತೊಂದರೆ , ಕೊಳವೆಬಾವಿ ಸ್ಥಗಿತ, ಇವೆಲ್ಲವೂ ಕೃಷಿ ಹಾಗು ಕೃಷಿಕನ ಸಂಕಷ್ಟಕ್ಕೆ ಕಾರಣಗಳಾದರೆ ಇನ್ನೊಂದೆಡೆ ಮಧ್ಯವರ್ತಿಗಳ ಗುತ್ತೆಗೆದಾರರ ಹಾಗು ಕೂಲಿಕಾರ್ಮಿಕರ ಸಮಸ್ಯೆ ಇವೆಲ್ಲವೂ ಮುಖ್ಯ ಪ್ರಭಲ ಕೃಷಿಯ ಸಂಕಷ್ಟಗಳಿಗೆ ಕಾರಣವಾಗುವ ಅಂಶಗಳು. ಇದರ ಜೊತೆಗೆ ಬೆಲೆಯಿದ್ದಾಗ ಬೆಳೆಯಿಲ್ಲದಿರುವುದು ಹಾಗು ಬೆಳೆಯಿದ್ದಾಗ ಬೆಲೆಯಿಲ್ಲದಿರುವುದು ಇನ್ನೊಂದು ರೀತಿಯ ಹತಾಶೆ ಕೃಷಿಕನಿಗೆ. ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಡು ನಮ್ಮ ಕೃಷಿಕ ಭಾರತಿ ಒಂದು ಡಿಜಿಟಲ್ ಆ್ಯಪ್ಅನ್ನು ಅಭಿವೃದ್ಧಿ ಪಡಿಸಿದ್ದೇವೆ.
ಕೃಷಿಕ ಭಾರತಿ ಹೆಸರಿನಲ್ಲೇ ಸೂಚಿಸಿರುವಂತೆ ಭಾರತ ದೇಶದ ಪ್ರತಿಯೊಂದು ಹಳ್ಳಿ ಹಳ್ಳಿಯ ಕೃಷಿಕನ್ನನೂ ಹಾಗು ಅವನ ಅಗತ್ಯತೆಯನ್ನು ಹಾಗು ಆಲೋಚನೆ ಆಧಾರಿತ ಅಂಶಗಳನ್ನೊಳಗೊಡ ವೃತ್ತಿಪರ ಕೃಷಿಕನಿಂದ ಅಭಿವೃದ್ಧಿಪಡಿಸಲ್ಪಟ್ಟ ಆ್ಯಪ್ ಇದಾಗಿದೆ. ಸ್ವಯಂ ಪ್ರೇರಿತ ಆಲೋಚನೆಗಳಿಂದ ಹಾಗು ಅನುಭವಗಳಿಂದ ಹಾಗು ಆಧುನಿಕ ತಂತ್ರಜ್ಞಾನದ ದೂರ ದೃಷ್ಟಿಯಿಂದ ಈ ಆ್ಯಪ್ ರಚನೆಯಾಗಿದೆ.
ಕೃಷಿ ಎಂಬ ಪದದಲ್ಲೇ E ಇದೆ. E ಎಂದರೆ Electronic ಮಾಧ್ಯಮ ಕೃಷಿಯನ್ನು e -ಮಾದ್ಯಮದಲ್ಲಿ ತರಲಿಕ್ಕೆ ಸಾಧ್ಯವಿಲ್ಲ ಎಂಬ ಹಟದಿಂದ ಕರ್ನಾಟಕದ ಒಂದು ಪುಟ್ಟ ಹಳ್ಳಿಯಲ್ಲಿ ತಯಾರಾದ ಉಪಾಯವಿದು ಕೊನೆಗೂ e -ಮಾದ್ಯಮದಲ್ಲಿ ಕೃಷಿ , ಕೃಷಿಯೇತರ ಚಟುವಟಿಕೆಗಳು, ಕೃಷಿಯೇತರ ವ್ಯವಹಾರಗಳು ನೆಡೆಯಲು ಹಾಗು ಕೃಷಿಯಾಧಾರಿತ ಮಾಹಿತಿ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸಲು ಈ ಆ್ಯಪ್ ಸದೃಢಗೊಂಡಿದೆ.
ಪ್ರತಿಯೊಬ್ಬ ಕೃಷಿಕನು ಯಾವುದೇ ರೀತಿಯ ಸೌಲಭ್ಯ ವಂಚಿತ , ತಂತ್ರಜ್ಞಾನ ವಂಚಿತ ಹಾಗು ವಿದ್ಯಾ ವಂಚಿತ ಹಾಗು ವ್ಯವಹಾರ ವಂಚಿತನಾಗಬಾರದೆಂದು ಕೃಷಿಕ ಭಾರತೀಯ ದೃಢಸಂಕಲ್ಪದಿಂದ ಹೆಜ್ಜೆಯಾಕುತ್ತಿದೆ. ಇದರನುಸಾರ ಒಟ್ಟು ಕರ್ನಾಟಕದಲ್ಲಿರುವ ೩೦ ಜಿಲ್ಲೆ, ೨೨೧ ತಾಲೂಕು, ೩೦೦೦೦ ಹಳ್ಳಿಯಲ್ಲಿರುವ ಕೃಷಿಕರು ಕೂಡ ಸಾಮಾನ್ಯ ಕೃಷಿಕನೆ ಎಂದು ತಿಳಿದಿದ್ದಾರೆ. ಆದರೆ ಸಾಮಾನ್ಯ ಕೃಷಿಕನು ಕೂಡ ಪೂರಕ ಜ್ಞಾನ , ಕೃಷಿ ಸಂಪನ್ಮೂಲ ಜಾಗೃತಿ , ಮದ್ಯವರ್ತಿ ರಹಿತ ವ್ಯವಹಾರ , ಅಗತ್ಯ ಪ್ರಮಾಣದ ಬೆಲೆ , ಇವೆಲ್ಲವೂ ಸೂಕ್ತ ಸಮಯದಲ್ಲಿ ದೊರೆತಾಗ ಕೃಷಿಉದ್ಯಮಿಯಾಗಿ ಹೊರಹೊಮ್ಮುತ್ತಾನೆ ಎಂದು ಕೃಷಿಕ ಭಾರತಿ ತಿಳಿಸುತ್ತದೆ.
ಸಣ್ಣ ಭೂ ಹಿಡುವಳಿದಾರರಿಗೆ ಪ್ರಜಾತಂತ್ರಜ್ಞಾನ ವನ್ನು ಪ್ರಜಾಪ್ರಭುತ್ವ ಗೊಳಿಸಿ ಕರ್ನಾಟಕವನಷ್ಟೇ ಅಲ್ಲದೆ ಇಡೀ ಭಾರತವನ್ನು ಕೃಷಿಕ ರಾಷ್ಟ್ರವನ್ನಾಗಿ ಪರಿಣಿತಿ ಹೊಂದಿ ಮುನ್ನೆಡೆಸಲು ಕೃಷಿಕ ಭಾರತಿ ಶ್ರೇಷ್ಠತೆಯ ಜೀವಂತ ಸಂಸ್ಥೆಯಾಗಿದೆ. ಕೃಷಿಕ ಭಾರತಿ ತಂತ್ರಜ್ಞಾನದ ವೇದಿಕೆಯಾಗಿದ್ದು ನಾವು ನೇರವಾಗಿ ಕೃಷಿಕರೊಂದಿಗೆ ಕಾರ್ಯನಿರ್ವಹಿಸುತ್ತೇವೆ. ನಾವು ಕೃಷಿಕ ಭಾರತದಲ್ಲಿ ಭಾರತದ ಅತ್ಯಂತ ಗರಿಷ್ಠ ಕೃಷಿಕರನ್ನು ತಲುಪುವ ದೂರದೃಷ್ಟಿಯೊಂದಿಗೆ ಭಾರತದಲ್ಲಿ ಸ್ಥಾಪಿತವಾಗಿದ್ದೇವೆ.
ನಾವು ಕೃಷಿಕ ಭಾರತೀಯ ಮುಖೆನ ಭಾರತದಲ್ಲಿರುವ ಅದರಲ್ಲೂ ಕರ್ನಾಟದಲ್ಲಿರುವ ತಂತ್ರಜ್ಞಾನ ಮತ್ತು ಕೃಷಿಯ ನಡುವೆ ಒಂದು ಉಕ್ಕಿನ ಸೇತುವೆ ನಿರ್ಮಾಣ ಮಾಡುವ ದೃಢ ದ್ಯೇಯ ವನ್ನು ಅನುಸರಿಸುತ್ತೇವೆ.ವ್ಯಜ್ಞಾನಿಕ ತಂತ್ರಗಳ ಮೂಲಕ ಹಾಗು ವ್ಯವಸ್ಥಿತ ಅನುಷ್ಠಾನದ ಮೂಲಕ ಮತ್ತು ಸೂಕ್ತ ಸಮಯದಲ್ಲಿ ಜೊತೆಗೆ ನಿಯಮಿತ ಮೇಲ್ವಿಚಾರಣೆ ಮೂಲಕ ಮತ್ತು ವಿಮರ್ಶತ್ಮಕ ಮಾಹಿತಿಯನ್ನು ಒದಗಿಸುವ ಮೂಲಕ ನಾವು ರೈತರನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಇನ್ನಷ್ಟು ಬೆಳೆಯಲು ದಕ್ಷತೆಯಿಂದ ಕೃಷಿಕರನ್ನು ಬೆಂಬಲಿಸುತ್ತೇವೆ.
ಕೃಷಿಕ ಭಾರತದಲ್ಲಿ ನಾವು ಕೃಷಿಕರ ಅಗತ್ಯಗಳನ್ನು ಸಂಪೂರ್ಣವಾಗಿ ಹಾಗು ಜವಾಬ್ದಾರಯುತವಾಗಿ ಅರ್ಥಮಾಡಿಕೊಂಡಿದ್ದೇವೆ . ಸಾವಿರಾರು ಹಳ್ಳಿಯಲ್ಲಿರುವ ಕೃಷಿಕರು ಆದುನಿಕ ತಂತ್ರಜ್ಞಾನ ದೊಂದಿಗೆ ಹಾಗು ವ್ಯವಸ್ಥಿತ ಕಾರ್ಯಗಳೊಂದಿಗೆ ಮುಂದಿನ ಯಶಸ್ವಿ ಭವಿಷ್ಯಕ್ಕಾಗಿ ನಮ್ಮ ಕೃಷಿಕರು ಆ ಅವಕಾಶಕ್ಕಾಗಿ ಅರ್ಹರು ಎಂದು ನಾವು ದೃಢವಾಗಿ ನಂಬುತ್ತೇವೆ . ಕೃಷಿಕ ಭಾರತಿಯಲ್ಲಿ ಮಾತ್ರ ಲಭ್ಯವಿರುವ ಈ ವಿಶೇಷ ವೈಶಿಷ್ಟತೆ ಯೊಂದಿಗೆ ನಿಮ್ಮ ಕೃಷಿಯೋದ್ಯಮದ ಯಾವುದೇ ಉತ್ಪನ್ನಗಳನ್ನು ನೇರವಾಗಿ ಸೂಕ್ತ ಮಾರುಕಟ್ಟೆ ದರ ತಿಳಿದುಕೊಂಡು ಮಾರಾಟ ಮಾಡಬಹುದಾಗಿದೆ ಹಾಗು ಖರೀದಿ ಮಾಡಬಹುದಾಗಿದೆ.
ಕೃಷಿಕ ಭಾರತಿಯು ಬೆಳೆ ಸಲಹಾ ಅಭ್ಯಾಸದಲ್ಲಿ ಉತ್ತವಾಗಿದೆ. ಉತ್ಪಾದನೆಯಿಂದ ಆರಂಭವಾಗಿ ಕಟಾವಿನವರೆಗೆ , ಆರಂಭದಿಂದ ಮಾರಾಟದ ವರೆಗೆ ಸಂಪೂರ್ಣ ಭದ್ರತೆಯಿದ ಹಿಡಿದು ನಿರ್ವಹಣೆ ವರೆಗೆ ಪ್ರಾಯೋಗಿಕ ಕೃಷಿಸಲಹೆಯನ್ನು ಒದಗಿಸುವ ಕರ್ನಾಟಕದ ಏಕೈಕ ಅಪ್ಲಿಕೇಶನ್ ಇದಾಗಿದೆ.
ಅತ್ಯುತ್ತಮ ಗುಣಮಟ್ಟದ ಪರಿಶೀಲನೆಯಾದಾರಿತ ಸ್ಮಾರ್ಟ್ ಕೃಷಿ ಉತ್ತಮ ಹೊಚ್ಚ ಹೊಸ ಅನುಭವಗಳನ್ನು ನೀಡಲು ನಾವು ಸ್ಮಾರ್ಟ್ ಸಲಹೆಗಳು ಹಾಗು ಇತ್ತೀಚಿನ ಕೃಷಿ ಆವಿಷ್ಕಾರ ಹಾಗು ಬಹುಮಟ್ಟದ ತಂತ್ರಜ್ಞಾನಗಳ ಕುರಿತು ವಿಶೇಷ ಲೇಖನಗಳು ಹಾಗು ಅಂಕಣಗಳನ್ನು ಜೊತೆಗೆ ಪೂರಕವಾಗಿ ವಿಡಿಯೋ ಆಧಾರಿತ ಬಹು ಮುಖ್ಯ ಮಾಹಿತಿಗಳನ್ನು ಶ್ರೇಷ್ಠ ಗುಣಮಟ್ಟದ ಜೊತೆಗೆ ಪ್ರಸ್ತುತಪಡಿಸುತ್ತೆವೆ.
ಇದರಿಂದ ಸಾಮಾನ್ಯ ಸಣ್ಣ ಕೃಷಿಕನು ಕೂಡ ಕೃಷಿಕೋದ್ಯಮಿಯಾಗಿ ಶ್ರೇಷ್ಠ ಪರಿಣಿತಿಯನ್ನು ಹೊಂದುತ್ತಾನೆಂದು ಕೃಷಿಕ ಭಾರತಿಯು ಆತ್ಮವಿಶ್ವಾಸದಿಂದ ಈ ಕಾರ್ಯವನ್ನು ಸರಿ ಪ್ರಮಾಣದಲ್ಲಿ ಒದಗಿಸುತ್ತಿದೆ. ಮುಂದಿನ ದಿನಗಳಲ್ಲಿ ಅಂದರೆ ಡೇನ ಕಳೆದಂತೆ ಕೃಷಿಕರಿಗೆ ಇನ್ನು ಉತ್ತೆಚನಕಾರಿ ಹಾಗು ಪ್ರೇರೇಪಣಾಕಾರಿ ಬಹುದೊಡ್ಡ ಅಂಗ ಸಂಸ್ಥೆಯನ್ನು ಒದಗಿಸುತ್ತದೆ.
ನಮ್ಮ ವಿಷನ್ (ಕೃಷಿಕ ಭಾರತಿ ವಿಷನ್)
ಕೃಷಿಕ ಭಾರತಿಯು ಪ್ರತಿಯೊಂದು ಹಳ್ಳಿಹಳ್ಳಿಯಲ್ಲೂ ರೈತ ಸಂಪರ್ಕ ಕೇಂದ್ರಗಳನೊಳಗೊಂಡ ಶಾಖೆಯನ್ನುಆರಂಭಿಸುತ್ತೆವೆ. ಕೃಷಿಕರು ತಮ್ಮ ಕೃಷಿಉತ್ಪನ್ನ ಗಳನ್ನೂ ನೇರವಾಗಿ ತಮ್ಮ ಊರಿನಲ್ಲಿಯೇ ಇರುವ ರೈತ ಸಂಪರ್ಕ ನಿರ್ವಾಹಕರಿಗೆ ನೇರವಾಗಿ ಉತ್ತಮ ಬೆಲೆಯೊಂದಿಗೆ ಯಾವುದೇ ಮಧ್ಯವರ್ತಿಗಳಿಲ್ಲದೆ ಖರೀದಿ ಹಾಗು ಮಾರಾಟ ಮಾಡಲಾಗುತ್ತದೆ.
ಪ್ರತಿಯೊಂದು ಹಳ್ಳಿಯ ರೈತ ಸಂಪರ್ಕ ನಿರ್ವಾಹಕನು ಅದೇ ಊರಿನ ನಿವಾಸಿಯಾಗಿರುತ್ತಾನೆ . ಇದರಿಂದಾಗಿ ದೋಷರಹಿತ ಕೃಷಿಕ ಸೇವೆಯನ್ನು ಸಮರ್ಪಕವಾಗಿ ನೀಡಲು ಸಾಧ್ಯವಾಗುತ್ತದೆ. ಕೃಷಿಕರ ಎಲ್ಲಾ ಬಗೆಯ ಉತ್ಪನ್ನಗಳು , ಯಂತ್ರೋಪಕರಣಗಳು ಹಾಗು ಇತರೆ ಎಲ್ಲವನ್ನು ಪಾರದರ್ಶಕತೆಯಿಂದ ವ್ಯವಹರಿಸಲು ಅನುಕೂಲವಾದ ಒಂದು ಸೂಕ್ತ ವೇದಿಕೆ ನಿರ್ಮಾಣಗೊಳ್ಳುತ್ತದೆ . ಕೃಷಿಕರು ತಮ್ಮ ವಾರ್ಷಿಕ ಬೆಳೆಗಳ ಮೇಲೆ ಹಾಗು ಜಾನುವಾರುಗಳ ಮೇಲೆ ವಿಮೆಯನ್ನು ಹಾಗು ಪ್ರತಿಯೊಬ್ಬ ಕೃಷಿಕನ ಜೀವ ವಿಮೆಯನ್ನು ಕಲ್ಪಿಸಿಕೊಡುವಾಗಲಿ ಮುಂದಿನ ದಿನಗಳಲ್ಲಿ ಯಶಸ್ವಿಯಾಗುತ್ತೆವೆ.
ಕೃಷಿಕರಿಗೆ ಸಣ್ಣ ಮಟ್ಟದ ಹಾಗು ಬಡ್ಡಿ ರಹಿತವಾಗಿ ಸಾಲ ಸೌಲಭ್ಯವನ್ನು ಒದಗಿಸಿಕೊಡುವಲ್ಲಿ ಯಶಸ್ವಿಯಾಗುತ್ತೆವೆ. ಒಂದು ಪರಿಪೂರ್ಣ ಶ್ರೇಷ್ಠ ಪರಿಣಿತಿವುಳ್ಳ ದೇಶದ ಹಾಗು ರಾಜ್ಯದ ಕೃಷಿಗೆ ಬೆನ್ನೆಲುಬಾಗಿ ನಿಲ್ಲುವ ಬಹುದೊಡ್ಡ ಕಾರ್ಯಂಗವಾಗಿ ಕೃಷಿಕ ಭಾರತಿಯು ಅನುಷ್ಠಾನಗೊಳ್ಳುತ್ತದೆ.